ಒಲವ ಮುಂಗಾರಿನ ಹನಿ

Author : ಬಾಗೂರು ಮಾರ್ಕಾಂಡೇಯ

Pages 156

₹ 80.00




Year of Publication: 2012
Published by: ನ್ಯೂ ವೇವ್ ಬುಕ್ಸ್
Address: ನಂ. 90/3. ಒಂದನೇ ಮಹಡಿ. ಈ.ಎ.ಟಿ. ಸ್ಟ್ರೀಟ್ ಬಸವನಗುಡಿ, ಬೆಂಗಳೂರು-560 004
Phone: 08041691270

Synopsys

ಒಲವ ಮುಂಗಾರಿನ ಹನಿ-ಬಾಗೂರು ಮಾರ್ಕಾಂಡೇಯ ಅವರು ಬರೆದ ಕವನ ಸಂಕಲನ. 123 ಕವಿತೆಗಳಿವೆ. ಪ್ರಕೃತಿ ಪ್ರೀತಿ ಮತ್ತು ಜನಸಮಾನ್ಯರ ನೋವು ನಲಿವುಗಳನ್ನು ಕವಿತೆಗಟ್ಟುವ ಪ್ರಯತ್ನ ಮಾಡಲಾಗಿದೆ. ‘..ಬಾಳಿನ ಬುತ್ತಿಗೆ ಹಿಡಿದಿದೆ ಕತ್ತಿ ಗೆದ್ದರೆ ಮುಕ್ತಿ ಸೋಲುವ ಭಕ್ತಿ ಕುಂದುವ ಶಕ್ತಿ ನರಕಕ್ಕೆ ಹೋಗುತ್ತಿ..’ ಹೀಗೆ ತೊಳಲುವ ನಿರಾಶಾದಾಯಕ ಮನದ ಸ್ಥತಿಯನ್ನು ಪ್ರತಿಧ್ವನಿಸಿದರೆ ‘. ಅದಾವ ವೈಣಿಕನ ಕೊಳಲೋ ಸವಿಯಲಿ ನುಡಿದೇ ನುಡಿವುದು ಮಾಧುರ್ಯದ ಗಾನದಿಂಪು ಏಕೋ ತುನಮನವ ತುಂಬಿಹುದು..’  ಎನ್ನುವ ಕವಿತೆ ಅನುರಣಿಸುತ್ತದೆ.  ಹೀಗೆ ಗೀತೆಗಳು ಓದುಗರನ್ನು ಸೆಳೆಯುತ್ತದೆ.

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books