ಈಗಿಲ್ಲಿ ಎಲ್ಲವೂ ಮೆಸ್ಸಿ!

Author : ಎಂ.ಆರ್. ಕಮಲ

₹ 150.00




Year of Publication: 2025
Published by: ಬಹುರೂಪಿ ಪ್ರಕಾಶನ
Address: ಬಸಪ್ಪ ಬಡಾವಣೆ, ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು.
Phone: 7019182729

Synopsys

‘ಈಗಿಲ್ಲಿ ಎಲ್ಲವೂ ಮೆಸ್ಸಿ!’ ಕೃತಿಯು ಎಂ.ಆರ್. ಕಮಲ ಅವರ ಗದ್ಯಗಂಧಿ ಕವಿತೆಗಳ ಸಂಕಲನ. ಅರಬ್ ಕವಿಗಳ ಗದ್ಯಗಂಧಿಯ ಜಾಡು ಹಿಡಿದು, ಆನು ಒಲಿದಂತೆ ಇಲ್ಲಿ ಕಾವ್ಯವನ್ನು ಹೊರಳಿಸಿರುವ ಪರಿ ವಿಭಿನ್ನ. ಓದುತ್ತಾ ಹೋದಂತೆ ರೂಪಾತ್ಮಕದೊಂದಿಗೆ ಕಾವ್ಯಾತ್ಮಕವಾಗಿಸುವ ಕವಿತೆಗಳ ಗಂಧ ಮನಸ್ಸಿನಲ್ಲಿ ಇಳಿದುಬಿಡುತ್ತವೆ. ಒಟ್ಟಾರೆಯಾಗಿ ನಮ್ಮನ್ನು ಕಲಕುವ ಸಂಕಲನಗಳ ಹೂರಣ ‘ಈಗಿಲ್ಲ ಎಲ್ಲವೂ ಮೆಸ್ಸಿ!’

About the Author

ಎಂ.ಆರ್. ಕಮಲ
(27 March 1959)

ಕವಿ-ಅನುವಾದಕಿಯಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಎಂ.ಆರ್. ಕಮಲಾ ಅವರು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. 1959ರ ಮಾರ್ಚ್‌ 27ರಂದು ಜನಿಸಿದರು. ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ ಚಿನ್ನದ ಪದಕ ವಿಜೇತರು.  ಫ್ರೆಂಚ್ ಭಾಷೆಯಲ್ಲಿ ಪದವೀಧರರು. ಶಕುಂತಲೋಪಾಖ್ಯಾನ (1988), ಜಾಣೆ ಮತ್ತು ಇತರ ಕವಿತೆಗಳು (1992), ಹೂವು ಚೆಲ್ಲಿದ ಹಾದಿ (2007), ಮಾರಿಬಿಡಿ (2017) ಕವನ ಸಂಕಲನಗಳು. ಆಫ್ರಿಕನ್-ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ’ಕತ್ತಲ ಹೂವಿನ ಹಾಡು (1989) ...

READ MORE

Related Books