ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು

Author : ಮಚ್ಚೇಂದ್ರ ಪಿ.ಅಣಕಲ್.

Pages 42

₹ 20.00




Year of Publication: 2001
Published by: ಅಣಕಲ್ ಪ್ರಕಾಶನ.
Address: ಶರಣನಗರ (ಕಿಣ್ಣಿ) -585437.ತಾ.ಬಸವಕಲ್ಯಾಣ. ಜಿ.ಬೀದರ
Phone: 9945129331

Synopsys

ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು-ಕವಿ ಮಚ್ಛೇಂದ್ರ ಪಿ. ಅಣಕಲ್ ಅವರ ಮೊದಲ ಕವನ ಸಂಕಲನ. ಪ್ರೀತಿ, ಪ್ರೇಮ, ಪರಿಸರ,ಕಾರ್ಗಿಲ್ ಯುದ್ಧ, ಅಂಬೇಡ್ಕರ್ , ಪರಿಸರ ಮಾಲಿನ್ಯ ಹೀಗೆ ವಸ್ತು ವೈವಿಧ್ಯತೆಯ ಕವನಗಳು ಒಳಗೊಂಡಿವೆ. ಸಾಹಿತಿ ಡಾ. ಟಿ.ಎಂ. ಭಾಸ್ಕರ್ ಅವರು ಕೃತಿಗೆ ಮುನ್ನುಡಿ ಹಾಗೂ ಪ್ರೊ.ಸೂರ್ಯಕಾಂತ ಶೀಲವಂತ ಅವರು ಬೆನ್ನುಡಿ ಬರೆದು ‘ವಸ್ತು ವೈವಿಧ್ಯತೆಯ ಇಲ್ಲಿಯ ಕವನಗಳು ಕಾವ್ಯಾಂಶಭರಿತವಾಗಿವೆ ಎಂದು ಪ್ರಶಂಸಿಸಿದ್ದಾರೆ. 

 

 

About the Author

ಮಚ್ಚೇಂದ್ರ ಪಿ.ಅಣಕಲ್.
(12 June 1979)

ಮಚ್ಚೇಂದ್ರ ಪಿ ಅಣಕಲ್ ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದಲ್ಲಿ 12-06-1979 ರಂದು ಜನಿಸಿದರು. ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರು. ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಎಂ.ಇಡಿ ಪದವೀಧರರು.  ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ 'ಲಾಟರಿ'ಕತೆ  ಬಹುಮಾನ ಪಡೆದಿದೆ . 2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ  ...

READ MORE

Related Books