ಕಿಂಕಿಣಿ

Author : ಶ್ವೇತಾ ಕಿಶೋರ ನರಗುಂದ

₹ 60.00




Year of Publication: 2006
Published by: ಜಡಭರತ ಪ್ರಕಾಶನ
Address: ಧಾರವಾಡ

Synopsys

ಕವಿ ಶ್ವೇತಾ ಕಿಶೋರ ನರಗುಂದ ಅವರ ಕವನ ಸಂಕಲನ ಕಿಂಕಿಣಿ. ಬದುಕಿನುದ್ದಕ್ಕೂ ಎದುರಾಗುವ ಘಟನೆಗಳ ಸುತ್ತ ಮೂಡುವ ಮನಸ್ಸಿನ ಎಳೆಗಳನ್ನು ಹಸಿಹಸಿಯಾಗಿ ಮೂಡಿಸುವ ಪ್ರಯತ್ನ ಇಲ್ಲಿದೆ. ಕವಿ ಸುಬ್ರಾಯ ಚೊಕ್ಕಾಡಿಯವರು ಹೇಳುವಂತೆ, ಚಂದ್ರಕಾಂತ ಕುಸನೂರ ಅವರು ಗುರುತಿಸಿರುವಂತೆ ಅಭಿವ್ಯಕ್ತಿಯಲ್ಲಿನ ನಿಖರತೆ ಇಲ್ಲಿನ ಕವಿತೆಗಳ ಮುಖ್ಯ ಗುಣವಾಗಿದೆ. ಶ್ವೇತಾ ಅವರ ಕವಿತೆಗಳು ಅಬ್ಬರವಿಲ್ಲದೆ ಸರಳ ಸುಂದರ ಭಾವಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿವೆ. ಲಯದ ಮೇಲೆ ಸಾಕಷ್ಟು ಹಿಡಿತವಿರುವ, ಒಂದೆರಡು ಗೇಯ ಗೀತೆಗಳನ್ನೂ ನೀಡಿರುವ ಶ್ವೇತಾ ಅವರ ಕವಿತೆಗಳು, ಕುಸನೂರರು ಹೇಳುವಂತೆ `ಹಸಿರು ಹುಲ್ಲಿನ ಹಾಸಿಗೆಯಲ್ಲಿ ನೀಲಿ-ಹಳದಿ ಹೂ ಅರಳಿದಂತೆ’ ಕಾಣಿಸುತ್ತವೆ ಎಂದಿದ್ದಾರೆ.

About the Author

ಶ್ವೇತಾ ಕಿಶೋರ ನರಗುಂದ
(01 February 1954)

ಲೇಖಕಿ ಶ್ವೇತಾ ಕಿಶೋರ ನರಗುಂದ ಅವರು 01-02-1954 ರಂದು ಬಾಗಲಕೋಟೆಯಲ್ಲಿ ಜನಿಸಿದರು. ಎಂ. ಎಸ್ಸಿ (ಹಾಸ್ಪಿಟಲ್ ಮ್ಯಾನೇಜ್‌ಮೆಂಟ್) ಪದವೀಧರರು. ತಂದೆ - ಚಿದಂಬರ ಜೋಶಿ, ತಾಯಿ - ಲಲಿತಾ ಜೋಶಿ. ಕೃತಿಗಳು: ಕಾತ್ಯಾಯನೀ ಅಮ್ಮನೂ ವೇಲು ಪಕ್ಷಿಯೂ (ಸಣ್ಣಕತೆ), ಹೇಮಗರ್ಭಾ, ಕಿಂಕಿಣಿ (ಕಾವ್ಯ), ತರರಂ ಪಂಪಂ (ಮಕ್ಕಳ ಕಾವ್ಯ) .  ಪ್ರಶಸ್ತಿ-ಗೌರವಗಳು: ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ, ಸುವರ್ಣ ಕರ್ನಾಟಕ ಪ್ರಶಸ್ತಿ(ಕಾಸರಗೋಡು ಸಾಹಿತ್ಯ ಪ್ರತಿಷ್ಠಾನ), ಸಿರಿಗನ್ನಡ ಪ್ರಶಸ್ತಿ (ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ) ಮುಂತಾದ ಪ್ರಶಸ್ತಿ-ಗೌರವಗಳು ಸಂದಿದೆ. ...

READ MORE

Related Books