ಪ್ರೀತಿ ಮತ್ತು ನೆತ್ತರು

Author : ರಂಗಸ್ವಾಮಿ ಎಸ್.

Pages 56

₹ 50.00




Published by: ಬರಹ ಪಬ್ಲಿಷಿಂಗ್ ಹೌಸ್ ಬೆಂಗಳೂರು

Synopsys

ಎಸ್.ರಂಗಸ್ವಾಮಿ ಅವರ ಕೃತಿ ಪ್ರೀತಿ ಮತ್ತು ನೆತ್ತರು. ಕಾವ್ಯದ ಪ್ರಾಥಮಿಕ ಪರಿಕರಗಳೊಂದಿಗೆ `ನೆನೆವ ಪರಿ ಹೊಸತು’ ಎಂಬಂತೆ ಕಾವ್ಯಕ್ಕಷ್ಟೇ ಸಾಧ್ಯವಾಗಬಲ್ಲ ಸೂಕ್ಷ್ಮ ಕಾಣ್ಕೆಗಳು, ಒಳನೋಟಗಳು, ಭಿನ್ನವೂ, ಅಮೂರ್ತ ಸೌಂದರ್ಯಾತ್ಮಕವೂ ಆದಂತಹ ಪರಿಕಲ್ಪನೆಗಳನ್ನು ಇಟ್ಟುಕೊಂಡೇ ಕವಿತೆಯನ್ನು ಬರೆವ ಉಮೇದು ತೋರಬೇಕಿದೆ. ಈ ಕಾವ್ಯ ಸಿದ್ಧತೆಯ ಕೆಲವಾದರೂ ಲಕ್ಷಣಗಳನ್ನು ಕವಿ ಮಿತ್ರ ರಂಗಸ್ವಾಮಿಯವರು ಅಲ್ಲಲ್ಲಿ ಇಣುಕಿ ಹಾಕಿಸಿರುವುದು ಅವರ ಕಾವ್ಯ ಪ್ರಯೋಗದ ಬಗ್ಗೆ ಆಸೆ, ನಿರೀಕ್ಷೆಗಳನ್ನು ಇಟ್ಟು ಕೊಳ್ಳಬಹುದೆಂಬ ಭರವಸೆಯನ್ನು ನೀಡುತ್ತವೆ. ಅವರ `ವಿಪರ್ಯಾಸ’, `ಸಾಕ್ಷೀಭೂತಗಳು’, `ಬದುಕಿನಲ್ಲೊಂದು ದಿನ’ ಮತ್ತು `ಬಂಧನದೊಳಗೊಂದು ರಾಜಿ’ ಎಂಬ ಕವಿತೆಗಳ ಬಿಗಿಬಂಧ, ಭಾಷಾ ಪ್ರಯೋಗ ಹಾಗೂ ಅಭಿವ್ಯಕ್ತಿ ವಿಧಾನಗಳನ್ನು ಕಂಡವರಿಗೆ ಇದು ಈ ಕವಿಗೆ ಅಸಾಧ್ಯವಾದುದೇನೂ ಅಲ್ಲವೆನಿಸುತ್ತದೆ. ಒಂದು ಹಂತದ ಈ ಯಶಸ್ವೀ ಪ್ರಯೋಗಗಳನ್ನು ದಾಟಿ ಕವಿ ರಂಗಸ್ವಾಮಿಯವರು ತಮ್ಮ ಶ್ರೇಷ್ಟ ಕಾವ್ಯದ ಅಸಲೀ ಕಸುಬುದಾರಿಕೆಗೆ ಹೊರಳಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂಬುದಾಗಿ ಮುನ್ನುಡಿಯಲ್ಲಿ ಲಕ್ಷ್ಮೀಪತಿ ಕೋಲಾರ ಅವರ ನುಡಿಗಳಿವೆ.

About the Author

ರಂಗಸ್ವಾಮಿ ಎಸ್.

ಬರಹಗಾರ ರಂಗಸ್ವಾಮಿ ಎಸ್. ಅವರು ಜನಿಸಿದ್ದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ದಮಗಲಯ್ಯನಪಾಳ್ಯದಲ್ಲಿ. ತುಮಕೂರುನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಡ್ರಾಮಾ ಡಿಪ್ಲೊಮಾ ಶಿಕ್ಷಣವನ್ನು ಪಡೆದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಇವರು ರಂಗಭೂಮಿ ಹಾಗೂ ಬೆಳ್ಳಿತೆರೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಭಗವತಿ ಕಾಡು ಹಾಗೂ ಮೌನ ಗಲ್ಲಿಗೇರಿತು ಇವರ ಪ್ರಮುಖ ಕೃತಿಗಳು. ...

READ MORE

Related Books